ಮುಂಡೇಶ್ವರಿ ದೇವಿ ದೇವಾಲಯವು ಭಾರತದ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾದಲ್ಲಿ ಮುಂಡೇಶ್ವರಿ ಗುಡ್ಡಗಳ ಮೇಲೆ ಸ್ಥಿತವಾಗಿದೆ. ಇದು ಒಂದು ಪ್ರಾಚೀನ ದೇವಾಲಯವಾಗಿದ್ದು ಶಿವ ಮತ್ತು ಶಕ್ತಿಯರ ಪೂಜೆಗೆ ಸಮರ್ಪಿತವಾಗಿದೆ. ಇದು ಭಾರತದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಇದು ಭಾರತದ ಅತ್ಯಂತ ಹಳೆಯ ಕಾರ್ಯಾತ್ಮಕ ಹಿಂದೂ ದೇವಾಲಯವೆಂದೂ ಪರಿಗಣಿತವಾಗಿದೆ. ಭಾರತದ ಪುರಾತತ್ವ ಸರ್ವೇಕ್ಷಣೆಯು (ಎಎಸ್‍ಐ) ಸ್ಥಳದಲ್ಲಿ ನಿಲ್ಲಿಸಿದ ಮಾಹಿತಿ ಫಲಕವು ಈ ದೇವಾಲಯದ ಕಾಲಮಾನ ನಿರ್ಧಾರವು ಕ್ರಿ.ಶ. ೬೨೫ ಎಂದು ಸೂಚಿಸುತ್ತದೆ. ಕ್ರಿ.ಶ. ೬೩೫ರ ಕಾಲಮಾನದ್ದೆಂದು ನಿರ್ಧರಿಸಲಾದ ಹಿಂದೂ ಶಾಸನಗಳು ದೇವಾಲಯದಲ್ಲಿ ದೊರಕಿವೆ. ಈ ದೇವಾಲಯವು ೧೯೧೫ರಿಂದ ಎಎಸ್‍ಐ ಅಡಿಯಲ್ಲಿ ರಕ್ಷಿತ ಸ್ಮಾರಕವಾಗಿದೆ. ಅಸಾಮಾನ್ಯ ರಾಕ್ಷಸನಾದ ಮಹಿಷಾಸುರನ ಸೋದರರು ಮತ್ತು ದಳವಾಯಿಗಳಾಗಿದ್ದ ಚಂಡ ಮತ್ತು ಮುಂಡರು ಈ ಪ್ರದೇಶವನ್ನು ಆಳುತ್ತಿದ್ದರು ಎಂದು ಸ್ಥಳೀಯ ಜಾನಪದಗಳು ಹೇಳುತ್ತವೆ. ಮುಂಡನು ದೇವಿ ಮುಂಡೇಶ್ವರಿ ಭವಾನಿ ದೇವಾಲಯವನ್ನು ನಿರ್ಮಿಸಿದನು. ಅವನ ತಮ್ಮ ಚಂಡನು ಚೈನ್‍ಪುರ್ ಹತ್ತಿರದ ಮದುರಾನಾ ಗುಡ್ಡದ ಮೇಲಿರುವ ಚಂಡೇಶ್ವರಿ ದೇವಾಲಯವನ್ನು ನಿರ್ಮಿಸಿದನು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==